LOYOLA SCHOOL MANVI
   LOYOLA SCHOOL – MANVI, RAICHUR

SCHOOL GENERAL RULES

  1. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ವಿದ್ಯಾರ್ಥಿ ಕೈಪಿಡಿಯನ್ನು (ಶಾಲಾಡೈರಿ) ಪ್ರತಿ ದಿನ ಶಾಲೆಗೆ ಕೊಂಡೊಯ್ಯಬೇಕು.
  2. ಅವಧಿಗಳ ನಡುವೆ, ತರಗತಿ ಕೊಠಡಿಗಳನ್ನು ಬದಲಾಯಿಸುವಾಗ, ಮೌನವಾಗಿ ಮತ್ತು ಕ್ರಮಬದ್ಧವಾಗಿ ವಿದ್ಯಾರ್ಥಿಗಳು ಒಂದೇ ಸಾಲಿನಲ್ಲಿ ಚಲಿಸಬೇಕು ಮತ್ತು ಅವಧಿಗಳ ನಡುವೆ ತರಗತಿಯ ಹೊರಗೆ ಗುಂಪು ಗೂಡಬಾರದು ತರಗತಿಯಿಂದ ತರಗತಿಗೆ ಬ್ಯಾಗ್ಗಳನ್ನು ಒಯ್ಯುವಂತಿಲ್ಲ.
  3. ಮಕ್ಕಳು ಬೆಳಿಗ್ಗೆ 8:45ಕ್ಕೆ ಶಾಲಾ ಆವರಣದಲ್ಲಿ ಹಾಜರಿರಬೇಕು. ಸಮಯಕ್ಕೆ ಮುಂಚೆ ಶಾಲೆಗೆ ಬರುವ ಮಕ್ಕಳು ಅವರವರ ತರಗತಿಗಳಲ್ಲಿ ಇರತಕ್ಕದ್ದು.
  4. ವಿದ್ಯಾರ್ಥಿಗಳು ಶಿಕ್ಷಕರ ಅನುಮತಿ ಇಲ್ಲದೆ ತರಗತಿಯ ಅವಧಿ ಮಧ್ಯ ಹೊರಗೆ ಹೋಗುವಂತಿಲ್ಲ ಮತ್ತು ಒಮ್ಮೆ ತರಗತಿಗೆ ಹಾಜಾರಾದ ಮೇಲೆ ಶಾಲೆ ಬಿಡುವವರೆಗೆ ತರಗತಿಯಿಂದ ಮಕ್ಕಳು ಹೊರಗೆ ಹೋಗಬಾರದು ಆದರೆ ವಿರಾಮದ ಅವಧಿಗಳಲ್ಲಿ ಶಾಲಾ ಆವರಣದೊಳಗೆ ಇರಬಹುದು ಮತ್ತು ಶಾಲಾ ಆವರಣದಿಂದ ಹೊರಗೆ ಹೋಗುವಂತಿಲ್ಲ. ಹೋಗಲೇ ಬೇಕಿದ್ದಲ್ಲಿ ಶಾಲಾ ಮುಖ್ಯೋಪಾಧ್ಯಾಯನಿ ಅನುಮತಿ ಅತ್ಯಗತ್ಯ.
  5. ವಿದ್ಯಾರ್ಥಿಗಳ ದೈನಂದಿನ ಹಾಜರಾತಿಯು ಕಡ್ಡಾಯ ಆದರೆ ಮದುವೆ ಅಥವಾ ಇತರೆ ಕಾರ್ಯಕ್ರಮಗಳಿಗೆ ರಜೆ ಅಗತ್ಯವಿದ್ದಲ್ಲಿ ಮುಂಚಿತವಾಗಿ ರಜಾ ಅರ್ಜಿ ಸಲ್ಲಿಸಬೇಕು. ಕೆಲಸವಿತ್ತು, ಕಾರ್ಯಕ್ರಮವಿತ್ತು ಎಂಬ ಆಸಂಬಂಧ ಹೇಳಿಕೆ ನೀಡಿ ಶಾಲೆಗೆ ಗೈರು ಹಾಜರಾಗುವುದು ಶಾಲೆ ನಿಯಮದ ಉಲ್ಲಂಘನೆ ಎನಿಸುತ್ತದೆ.
  6. ಮಗು ಯಾವುದೇ ಕಾರಣಕ್ಕೆ ಶಾಲೆಗೆ ತಡವಾಗಿ ಬಂದರೆ ತಪ್ಪದೇ ಶಾಲೆ ದಿನಚರಿಯಲ್ಲಿ ಸಾಕಾರಣ ಬರೆದು ಪಾಲಕರಿಂದ ಸಹಿ ಮಾಡಿಸಿ ಶಾಲೆಯ ಪ್ರಾಚಾರ್ಯರ ಸಹಿ ಪಡೆದ ನಂತರವೇ ವಿದ್ಯಾರ್ಥಿಗಳಿಗೆ ತರಗತಿಗೆ ಪ್ರವೇಶ, ಶಾಲೆಯಿಂದ ಗೋಡೆ ಹಾರಿ ಹೋದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು.
  7. ಶಾಲಾ ಪರೀಕ್ಷೆಗಳು ಹಾಗೂ ರಜಾ ದಿನಗಳ ನಂತರ ಶಾಲೆಯ ಪುನರಾರಂಭ ದಿನದಂದು ಯಾವುದೇ ವಿದ್ಯಾರ್ಥಿ ಗೈರು ಹಾಜರಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ತುರ್ತು ಅನಾರೋಗ್ಯ ಇದ್ದರೆ ಆರೋಗ್ಯ ತಪಾಸಣೆ ಪತ್ರ ಅಥವಾ ವೈದ್ಯಕೀಯ ಪ್ರಮಾಣಪತ್ರ ಶಾಲೆಗೆ ಸಲ್ಲಿಸಬೇಕು.
  8. ಕಲಿಕೆಯಲ್ಲಿ ನಿರಂತರ ತೊಡಗುವಿಕೆ ಇಲ್ಲದೆ ಇರುವುದು, ಅವಾಚ್ಯ ಶಬ್ದ ಬಳಕೆ, ಆಶ್ಲೀಲ ನಡವಳಿಕೆಗಳು ಕಂಡುಬಂದಲ್ಲಿ, ಅಲ್ಲದೆ ಶಾಲೆಯ ವಸ್ತು ಅಥವಾ ಆಸ್ತಿ ಜಕ್ಕಂ ಮಾಡಿದಲ್ಲಿ ಮತ್ತು ನಿರಂತರವಾಗಿ ಶಾಲೆಗೆ ತಡವಾಗಿ ಬಂದಲ್ಲಿ ವಿದ್ಯಾರ್ಥಿಗಳಿಗೆ ಅವರವರ ತಪ್ಪಿಗೆ ಅನುಸಾರ ಶಾಶ್ವತವಾಗಿ ಇಲ್ಲವೇ ನಿಗದಿಪಡಿಸಿದ ಅವಧಿಯವರೆಗೆ ಶಾಲೆಯಿಂದ ಅಮಾನತುಗೊಳಿಸಿ ಸೂಕ್ತ ಕಾರಣಗಳೊಂದಿಗೆ ಶಿಸ್ತು ಕ್ರಮ ಜಾರಿಮಾಡಲಾಗುತ್ತದೆ.
  9. ಸಮಯಕ್ಕೆ ಸರಿಯಾಗಿ ಶಾಲಾ ಗೇಟುಗಳು ಮುಚ್ಚಲ್ಪಡುವುದು. ತದನಂತರ ಬಂದಂತಹ ವಿದ್ಯಾರ್ಥಿಗಳನ್ನು ಶಾಲಾ ಆವರಣದ ಒಳಗೆ ಬಿಡಲಾಗುವುದಿಲ್ಲ. ಪೋಷಕರು ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸುವ ಮೂಲಕ ಶಾಲೆಯೊಂದಿಗೆ ಸಹಕರಿಸಲು ವಿನಂತಿಸಲಾಗಿದೆ.
  10. ರಜೆಯು ಐದು ದಿನಗಳಿಗಿಂತ ಹೆಚ್ಚಿದ್ದರೆ ಪೋಷಕರು ವಿದ್ಯಾರ್ಥಿಯೊಂದಿಗೆ ಶಾಲೆಗೆ ಭೇಟಿ ನೀಡಬೇಕು. ಪ್ರತಿ ಅವಧಿಯ ನಂತರ ಪುನರಾರಂಭದ ದಿನದಂದು ರಜೆ ನೀಡಲಾಗುವುದಿಲ್ಲ.
  11. ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಇರುವವರೆಗೂ ಇಂಗ್ಲೀಷ್ನಲ್ಲಿ ಮಾತನಾಡಲು ಉತ್ತೇಜಿಸಲಾಗುತ್ತದೆ. ವಿದ್ಯಾರ್ಥಿಗಳು ಸ್ವಚ್ಛವಾಗಿರಬೇಕು ಮತ್ತು ಯಾವಾಗಲೂ ನೀಟಾಗಿ ಬಟ್ಟೆ ಧರಿಸಬೇಕು. ಶಾಲಾ ಸಮವಸ್ತ್ರವನ್ನು ಎಲ್ಲಾ ಶಾಲಾ ದಿನಗಳಲ್ಲಿ ಮತ್ತು ಎಲ್ಲಾ ಶಾಲಾ ಕಾರ್ಯಕ್ರಮಗಳಿಗೆ ಧರಿಸಬೇಕು. ಸರಿಯಾದ ಸಮವಸ್ತ್ರದಲ್ಲಿ ಇಲ್ಲದ ವಿದ್ಯಾರ್ಥಿಗಳಿಗೆ ತರಗತಿಗೆ ಪ್ರವೇಶ ನಿರಾಕರಿಸಬಹುದು ಮತ್ತು ಅವರನ್ನು ಮನೆಗೆ ಕಳುಹಿಸಬಹುದು.
  12. ವಿದ್ಯಾರ್ಥಿಗಳು ಯಾವುದೇ ಹರಿತವಾದ ಉಪಕರಣವನ್ನು ಶಾಲೆಗೆ ತರುವಂತಿಲ್ಲ. ಆಶಿಸ್ತಿನ ಚಟುವಟಿಕೆಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಚಿಸಿ ನೀಡುವ ಹಕ್ಕನ್ನು ಶಾಲೆ ಕಾಯ್ದಿರಿಸಿಕೊಂಡಿದೆ. ಹಣ ಅಥವಾ ಇತರ ವಸ್ತುಗಳನ್ನು ಸಾಲ ನೀಡುವುದು ಅಥವಾ ಎರವಲು ಪಡೆಯುವುದು schoolನಲ್ಲಿ ಅನುಮತಿಸಿಲ್ಲ.
  13. ಶಾಲೆಯಲ್ಲಿ ಮುಖ್ಯಸ್ಥರಿಗೆ ಹಾಗೂ ಶಿಕ್ಷಕರಿಗೆ ಗೌರವ ನೀಡಬೇಕು. ತರಗತಿಯಲ್ಲಿ ಹಾಗೂ ಶಾಲೆಯ ಆವರಣದಲ್ಲಿ ಸಭ್ಯವಾಗಿ ವರ್ತಿಸಬೇಕು. ನಿಯಮ ಉಲ್ಲಂಘನೆಯು ಗಂಭೀರವಾಗಿದ್ದರೆ, ವಿದ್ಯಾರ್ಥಿಯನ್ನು ಶಾಲೆಯಿಂದ ವಜಾಗೊಳಿಸಲಾಗುತ್ತದೆ.
  14. ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಚರ್ಚಿಸಲು ಪ್ರತಿ ತಿಂಗಳು ಶಾಲೆಗೆ ಭೇಟಿ ನೀಡುವಂತೆ ವಿನಂತಿಸಲಾಗಿದೆ. ಇತರರ ಮೇಲೆ ದೈಹಿಕ ಹಿಂಸೆಯಲ್ಲಿ ತೊಡಗಿದ ವಿದ್ಯಾರ್ಥಿಯನ್ನು ಅಮಾನತುಗೊಳಿಸಲಾಗುವುದು.